Wewant Kichcha Sudeep

Wewant Kichcha Sudeep we want kichcha sudeepa in KFI

ಸುದೀಪ್ ಅವರಿಗೆ ಆಗಿರುವ ನೋವೇನು?ಟ್ರೆಂಡಿಂಗ್ ಮಾಡೋಣ ಬನ್ನಿರೋ ಎಂದ ಫ್ಯಾನ್ಸ್  ನಟ ರಕ್ಷಿತ್ ಶೆಟ್ಟಿ ಚಿರಂಜೀವಿ ಸರ್ಜಾರಿಂದ ಟ್ವೀಟ್ ಮಾಡಿ ಮನವಿ...
29/07/2015

ಸುದೀಪ್ ಅವರಿಗೆ ಆಗಿರುವ ನೋವೇನು?
ಟ್ರೆಂಡಿಂಗ್ ಮಾಡೋಣ ಬನ್ನಿರೋ ಎಂದ ಫ್ಯಾನ್ಸ್
ನಟ ರಕ್ಷಿತ್ ಶೆಟ್ಟಿ ಚಿರಂಜೀವಿ ಸರ್ಜಾರಿಂದ ಟ್ವೀಟ್ ಮಾಡಿ ಮನವಿ
Read Here >

ಕಿಚ್ಚ ಸುದೀಪ್ ಅವರು ರನ್ನ ಚಿತ್ರದ 50ನೇ ದಿನದ ಸಂಭ್ರಮವನ್ನು ಹಂಚಿಕೊಂಡು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್ ನಲ್ಲಿ ನೀಡಿದ್ದ ಒಂದು ಹೇಳಿಕೆ ಅನೇಕ ಅರ್ಥಗಳನ್ನು ಹುಟ್ಟಿ ಹಾಕಿತ್ತು.

ಸುದೀಪ್ ಅವರಿಗೆ ರನ್ನ ಚಿತ್ರದ ನಿರ್ಮಾಪಕ ಹಾಗೂ ವಿತರಕರ ಮೇಲೆ ಏಕೋ ಮುನಿಸು ಉಂಟಾಗಿದೆ ಎನಿಸಿತ್ತು. ಅದರೆ, ಸುದೀಪ್ ಅವರಿಗೆ ಇಡೀ ಚಿತ್ರರಂಗವೇ ಬೇಡವೆನಿಸಿದೆ ಎಂಬ ವಿಷಯವನ್ನು ಚಿತ್ರಕರ್ಮಿ ಕೃಷ್ಣ ಅವರು ಹೊರ ಹಾಕುತ್ತಿದ್ದಂತೆ ಅಭಿಮಾನಿಗಳು ಬೆಚ್ಚಿದ್ದಾರೆ.

ಕಿಚ್ಚ ಸುದೀಪ, ನೀವು ಇಲ್ಲದ ಕನ್ನಡ ಚಿತ್ರರಂಗ ಊಹಿಸಿಕೊಳ್ಳಲು ಸಾಧ್ಯವಿಲ್ಲ. ನಮಗೆ ನಮ್ಮ ಕಿಚ್ಚ ಸುದೀಪ್ ವಾಪಸ್ ಬೇಕು ಎಂದು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಶುರುಮಾಡಿದ್ದಾರೆ. ಈ ಅಭಿಯಾನದಲ್ಲಿ ಕಿಚ್ಚನ ಅಭಿಮಾನಿಗಳಲ್ಲದೆ, ಯುವನಟ, ನಿರ್ದೇಶಕರು ಕೈಜೋಡಿಸಿದ್ದಾರೆ.
ಸುದೀಪ್ ಅವರೇ ನಿಮ್ಮ ಅಭಿಮಾನಿಗಳು ಕೇಳುತ್ತಿದ್ದಾರೆ ದಯವಿಟ್ಟು ಉತ್ತರಿಸಿ ಎಂದು ಟ್ವೀಟ್ ಮಾಡಿದ್ದಾರೆ. ಯಾಕೋ ಇತ್ತೀಚೆಗೆ ಚಿತ್ರರಂಗದವರು ಟ್ವಿಟ್ಟರ್ ಎಂಬ ಬ್ಲಾಗಿಂಗ್ ವೇದಿಕೆಯನ್ನು ವ್ಯಾಜ್ಯ ಪರಿಹಾರ ವೇದಿಕೆ ಮಾಡಿಕೊಂಡ ಹಾಗೆ ಕಾಣುತ್ತದೆ. ಸದ್ಯಕ್ಕೆ ಕಿಚ್ಚ ಸುದೀಪ್ ವಾಪಸ್ ಬನ್ನಿ ಎಂಬ ಕರೆಗೆ ಹೇಗೆ ಪ್ರತಿಕ್ರಿಯೆ ಬಂದಿದೆ ನೋಡಿ..

ಸದಭಿರುಚಿ ಚಿತ್ರಪ್ರೇಮಿಗಳ ವಾದ
ಇಷ್ಟಕ್ಕೂ ಸುದೀಪ್ ಅವರು ಎಲ್ಲೂ ಬಹಿರಂಗವಾಗಿ ಈ ಬಗ್ಗೆ ಹೇಳಿಲ್ಲ, ಅಸಮಾಧಾನ ವ್ಯಕ್ತಪಡಿಸಿಲ್ಲ. ಕೈತುಂಬಾ ಸಿನಿಮಾ ಇರುವಾಗ ಕೈಕಟ್ಟಿ ನಿಲ್ಲುವ ಪೈಕಿಯೂ ಅಲ್ಲ. ತಮ್ಮದೇ ಚಿತ್ರರಂಗದಿಂದ ತಾವೇ ಹೊರಕ್ಕೆ ಹೋಗುತ್ತೇನೆ ಅಥವಾ ದೂರವುಳಿಯುತ್ತೇನೆ ಎಂಬುದು ಎಷ್ಟರಮಟ್ಟಿಗೆ ಸರಿ ಎಂಬುದು ಸದಭಿರುಚಿ ಚಿತ್ರಪ್ರೇಮಿಗಳ ವಾದ.

ಸುದೀಪ್ ಅವರಿಗೆ ಆಗಿರುವ ನೋವೇನು?
ನಿರ್ಮಾಪಕರು, ವಿತರಕರ ಬಗ್ಗೆ ಸುದೀಪ್ ಟ್ವೀಟ್ ಮಾಡಿ, ಚಿತ್ರ ಬಿಡುಗಡೆಯಾದ ಮೇಲೆ ಅವರೊಟ್ಟಿಗೆ ಮಾತುಕತೆ ಮಾಡಿಲ್ಲ ಎಂದಿದ್ದಾರೆ. ಈ ಟ್ವೀಟ್ ಅರ್ಥ ಏನು ಎಂಬುದನ್ನು ಆಸಕ್ತರು ಸುದೀಪ್ ಅವರಿಗೆ ಟ್ವೀಟ್ ಮಾಡಿ ಕೇಳಬಹುದು. ಸುದೀಪ್ ಅವರಿಗೆ ಆಗಿರುವ ನೋವನ್ನು ಪರಿಹರಿಸುವತ್ತಾ ಚರ್ಚಿಸಬಹುದು..

ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿ ಮನವಿ
ನಟ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿ, ನಿಮ್ಮ ಅಭಿಮಾನಿ ಕೇಳುತ್ತಿದ್ದಾರೆ. ದಯವಿಟ್ಟು ಉತ್ತರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಚಿರಂಜೀವಿ ಸರ್ಜಾರಿಂದ ಟ್ವೀಟ್
ನಟ ಚಿರಂಜೀವಿ ಸರ್ಜಾ ಅವರು ಟ್ವೀಟ್ ಮಾಡಿ, ನಮ್ಮ ಮನವಿಗೆ ಓಗೊಟ್ಟು ಬೇಗ ನಮ್ಮ ಚಿಂತೆ ದೂರ ಮಾಡು ಬ್ರದರ್ ಎಂದಿದ್ದಾರೆ..

ಮುಂದಿನ ಯೋಜನೆ ಬಗ್ಗೆ ಸುದೀಪ್
ತಮಿಳಿನ ಕೆ ಎಸ್ ರವಿಕುಮಾರ್ ಜೊತೆ ಮಾಡುತ್ತಿರುವ ಸಿನಿಮಾ ಹಾಗೂ ಹೆಬ್ಬುಲಿ ಎರಡು ಕೂಡಾ ಏಕಕಾಲಕ್ಕೆ ಶೂಟಿಂಗ್ ನಡೆಯಲಿದೆ. ಕೆಎಸ್ ರವಿಕುಮಾರ್ ನಿರ್ದೇಶನದ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ ಎಂದಿದ್ದಾರೆ. ರನ್ನ ನಂತರ ನಂದ ಅವರ ಜೊತೆ ಲವ ಎಂಬ ಮತ್ತೊಂದು ಚಿತ್ರ ಮಾಡುವುದಾಗಿಯೂ ಸುದೀಪ್ ಹೇಳಿದ್ದಾರೆ..

ಸುದೀಪ್ ವೇದನೆ ಬಗ್ಗೆ ಸುಳಿವು ಕೊಟ್ಟ ಕೃಷ್ಣ
ಸುದೀಪ್ ಅವರಿಗೆ ಆಗಿರುವ ವೇದನೆ ಬಗ್ಗೆ ಮೊದಲಿಗೆ ಸುಳಿವು ಕೊಟ್ಟಿದ್ದು ಛಾಯಾಗ್ರಹಕ ಕಮ್ ನಿರ್ದೇಶಕ ಕೃಷ್ಣ. ನಂತರ ಅಭಿಮಾನಿಗಳು ಈ ಬಗ್ಗೆ ಪ್ರಶ್ನಿಸಿದರು..

ಟ್ರೆಂಡಿಂಗ್ ಮಾಡೋಣ ಬನ್ನಿರೋ ಎಂದ ಫ್ಯಾನ್ಸ್
ಟ್ರೆಂಡಿಂಗ್ ಮಾಡೋಣ ಬನ್ನಿರೋ ಎಂದ ಫ್ಯಾನ್ಸ್, ಫ್ಯಾನ್ ಕ್ಲಬ್ ಹಾಗೂ ಸಿನಿಮಾ ಆಧಾರಿತ ವೆಬ್ ತಾಣಗಳು..

ಸುದೀಪ್ ಇಲ್ಲದ ಚಿತ್ರರಂಗ ಊಹಿಸಲು ಸಾಧ್ಯವಿಲ್ಲ
ಸುದೀಪ್ ಇಲ್ಲದ ಚಿತ್ರರಂಗ ಊಹಿಸಲು ಸಾಧ್ಯವಿಲ್ಲ, ನಮಗೆ ನಮ್ಮ ಸುದೀಪ್ ಬೇಕು ಎಂದ ಅಭಿಮಾನಿ..

ದರ್ಶನ್ ಗೆ ಮೊರೆ ಹೊಕ್ಕ ಫ್ಯಾನ್ಸ್
ದರ್ಶನ್ ಅವರೇ ನೀವಾದ್ರೂ ಹೇಳಿ ಸುದೀಪ್ ಗೆ ಎಂದು ಮೊರೆ ಹೊಕ್ಕ ಫ್ಯಾನ್ಸ್

ಅಬ್ಬಾ !ಅಂತೂ ಟ್ರೆಂಡಿಂಗ್ ಆಗುತ್ತಿದೆ
ಅಬ್ಬಾ! ಅಂತೂ ಟ್ರೆಂಡಿಂಗ್ ಆಗುತ್ತಿದೆ ಎಂದು ಖುಷಿ ಪಟ್ಟ ತಂಡ

ನಮ್ಮ ಕಿಚ್ಚ ಸುದೀಪ್ ಅವರ ಬಗ್ಗೆ ನಿಮಗಿದುಗೋತ್ತೆ ?ಅದ್ಬುತ ವೆನಿಸುವ ವಿಷಯ ಓದಿ ...1.ಶಂಕರ್ ನಾಗ್ ಅವರನ್ನು ಚಿತ್ರದಲ್ಲಿ ಯಾರುನೆನೆಯದ ಸಂಧರ್ಭದ...
29/07/2015

ನಮ್ಮ ಕಿಚ್ಚ ಸುದೀಪ್ ಅವರ ಬಗ್ಗೆ ನಿಮಗಿದು
ಗೋತ್ತೆ ?
ಅದ್ಬುತ ವೆನಿಸುವ ವಿಷಯ ಓದಿ ...
1.ಶಂಕರ್ ನಾಗ್ ಅವರನ್ನು ಚಿತ್ರದಲ್ಲಿ ಯಾರು
ನೆನೆಯದ ಸಂಧರ್ಭದಲ್ಲಿ ಪ್ರಥಮ ಭಾರಿಗೆ ಶಂಕರ್ ನಾಗ್
ಅವರನ್ನು ಚಿತ್ರದಲ್ಲಿ ನೆನೆದದ್ದು ಅವರ ನೆನಪನ್ನು
ತೆರೆಯಮೇಲೆ ಧೈರ್ಯದಿ ತಂದದ್ದು ನಮ್ಮ ಕಿಚ್ಚ
ಸುದೀಪ್ ಅದು ರಂಗ sslc ಚಿತ್ರದಲ್ಲಿ, ನಂತರ
ಉಪೇಂದ್ರ ಅವರು ಆಟೋಶಂಕರ್ ನಲ್ಲಿ.ದರ್ಶನ್
ಅವರು ಸಾರಥಿಯಲ್ಲಿ.ಗಣೇಶ್ ಅವರು
ಆಟೋರಾಜದಲ್ಲಿ. ಯಶ್ ಅವರು ಗೋಗ್ಲಿಯಲ್ಲಿ.
2. ವಿಷ್ಣುವರ್ಧನ್ ಅವರನ್ನು ಚಿತ್ರದಲ್ಲಿ ಯಾರು
ನೆನೆಯದ ಸಂಧರ್ಭದಲ್ಲಿ ಪ್ರಥಮ ಭಾರಿಗೆ ವಿಷ್ಣುದಾದರ
ಧೈರ್ಯದಿ ನೆನಪು ತಂದದ್ದು ತೆರೆಮೇಲೆ ನೆನೆದದ್ದು
ನಟ ಕಿಚ್ಚ ಸುದೀಪ್. ಅದು ವಿಷ್ಣುವರ್ಧನ ಚಿತ್ರದಲ್ಲಿನಂತರ ಯಶ್ ಅವರು ರಾಮಾಚಾರಿಯಲ್ಲಿ.
3. ವಿಷ್ಣು ಸ್ಮಾರಕದ ನಿರ್ಮಾಣದ ವಿಚಾರದಲ್ಲಿ
ನಟರಲ್ಲಿ ಧ್ವನಿ ಎತ್ತಿದ ಮೊದಲ ನಟ ನಮ್ಮ ಕಿಚ್ಚ
ಸುದೀಪ್
4.KPL ನಂತಹ ಕ್ರಿಕೇಟ್ ಟೀಮ್ ಅನ್ನು ಖರೀದಿಸಿದ
ಮೊದಲ ಕನ್ನಡ ಚಿತ್ರ ನಟ ನಮ್ಮ ಸುದೀಪ್
5. ಶಿಕ್ಷಣದಲ್ಲಿ ಎಂಜಿನಿಯರ್ ಮುಗಿಸಿರುವ ನಟ ನಮ್ಮ
ಸುದೀಪ್
6. ಹತ್ತಾರು ಚಿತ್ರಗಳಿಗೆ ಸಂಭಾವನೆ ಪಡೆಯದೆ ನಟಿಸಿದ
ಹೆಮ್ಮೆಯ ನಟ ನಮ್ಮ ಸುದೀಪ್
7, ಹಲವು ಚಿತ್ರಗಳು ಸೋಲುಗಳನ್ನು ಕಂಡರು
ಹಲವಾರು ದೋಡ್ಡ ನಟರು ಕಾಲು ಎಳೆದರು
ಕುಗ್ಗದೆ ಎದ್ದುಬಂದ ಕನ್ನಡದ ಮರಿ ಸಿಂಹ
8. ಕಿಚ್ಚ ಸುದೀಪ್ ಅವರತ್ರ ಇರೋಷ್ಟು ಕಾರು
ಬೈಕ್ ಕಲೆಕ್ಷನ್ ಯಾವ ನಟರ ಬಳಿಯು ಇಲ್ಲಾ ...
9. ಸುದೀಪ್ ಅವರ ಮನೆಯಲ್ಲಿ ಕನ್ನಡದ ಎಲ್ಲಾ
ಮಹಾನ್ ನಟರ ಖಳನಟರ ಪೋಷಕರ ಮತ್ತು ಕ್ರಿಕೇಟ್
ಪಟುಗಳ ಚಿತ್ರಗಳ ಲೈಬ್ರೆರಿಯೆ ಇದೇ...ಇದು ಸಹ
ಸುದೀಪ್ ಅವರತ್ತಿರ ಮಾತ್ರ ಇರೋದು.
10.ಸುದೀಪ್ ನಟ ಅಷ್ಟೆ ಅಲ್ಲಾ ನಿರ್ದೇಶಕ.
ನಿರ್ಮಾಪಕ. ಬರವಣಿಗೆಗಾರ. ಹಾಡುಗಾರ. ನಿರೂಪಕ.
ಡಬ್ಬಿಂಗ್ ಅರ್ಟಿಸ್ಟ್, ಗಿಟಾರಿಸ್ಟ್.ಸಮಾಜ ಸೇವಕ.
ಬ್ರಾಂಡ್ ಅಂಬಾಸಿಡರ್ ಕ್ರೀಡಾ ಪಟು ಸಹ.
11.ಹುಟ್ಟು ಶ್ರೀಮಂತ ಮನೆತನ ವಾದರು
ಯಾವುದೆ ನೆರವು ಇನ್ಪ್ಲೋಯನ್ಸ್ ಇಲ್ಲದೆ ಅಪ್ಪನ
ಸಹಾಯ ಹೆಸರು ಬಳಸದೆ ತನ್ನ ಸ್ವಂತ ಪ್ರತಿಬೆ ಇಂದ
ಮೇಲೆ ಬಂದವರು ನಮ್ಮ ಸುದೀಪ್
12.ಸುದೀಪ್ ಚಿತ್ರರಂಗಕ್ಕು ಬರುವ ಮೊದಲು
ಉದಯ ಟಿವಿ ಪ್ರೇಮದ ಕಾದಂಬರಿ
ಧಾರಾವಾಹಿಯಲ್ಲಿ ನಟಿಸಿದ್ದರು
13. ಈಗಿನ ನಟರಿಗಿಂತ ಕಡಿಮೆ ರೀಮೇಕ್
ಮಾಡಿರುವುದು ನಮ್ಮ ಕಿಚ್ಚ ಮಾತ್ರ ಜಸ್ಟ್ 16
ರೀಮೇಕ್ ಒಟ್ಟು 55 ಚಿತ್ರದಿಂದ...
14. ಕನ್ನಡ ಸಿನಿಮಾ ತೆಲುಗು ತಮಿಳ್ ಹಿಂದಿ ಸಿನಿಮ.
ರಿಯಾಲಿಟಿ ಷೋ. ಕ್ರಿಕೇಟ್.
ಜಾಹಿರಾತುಗಳು.ಸಂಸಾರ. ಹೀಗೆ ವರ್ಷವಿಡಿ ಬಿಸಿ
ಇದ್ದರು ಎಲ್ಲವನ್ನು ಹಚ್ಚುಕಟ್ಟಾಗಿ
ಸರಿದೊಗಿಸುತ್ತಿರುವ ಏಕೈಕ ನಟ ನಮ್ಮ ಸುದೀಪ್
15. ಹಾಸ್ಯ ನಟ ಬಾಲಣ್ಣನವರ ಸ್ಮಾರಕ
ನಿರ್ಮಾಣವನ್ನು ಸುದೀಪ್ ಅವರೆ ಮಾಡಿಸಿದ್ದು
16. 3600ಚಿತ್ರಗಳಿಗೆ ದ್ವನಿ ಡಬ್ಬಿಂಗ್ ಮಾಡಿದ್ದ ನಟ
ರವಿಶಂಕರ್ ರವರನ್ನು ತೆರೆಯ ಮೇಲೆ ತಂದದ್ದು ಇದೇ
ಸುದೀಪ್
17. ಭಜರಂಗಿ ವಜ್ರಕಾಯ ಗೆಳೆಯ ಚಿತ್ರ
ನಿರ್ದೇಶಕ ಹರ್ಷರನ್ನು ರಂಗ sslc ಮೂಲಕ ನೃತ್ಯ
ನಿರ್ದೇಶನ ಅವಕಾಶ ನೀಡಿ ಚಿತ್ರರಂಗಕ್ಕೆ ತಂದದ್ದು
ಇದೇ ಸುದೀಪ್.
18. ಕಲಾ ನಿರ್ದೇಶಕ ಅರುಣ್ ಸಾಗರ್ ಅವರನ್ನು ತೆರೆಗೆ
ತಂದದ್ದು ಇದೇ ಸುದೀಪ್.
19. ದಾರವಾಹಿಯಲ್ಲಿ ಮಿಂಚುತ್ತಿರುವ ಜೇಕೆ ತೆರೆಗೆ
ತಂದದ್ದು ಇದೇ ಸುದೀಪ್.
20. ತರುಣ್ ಸುದೀರ್ ನಂದಕಿಶೋರ್ ರನ್ನು
ನಿರ್ದೇಶಕನಾಗಿ ಮಾಡಿದ್ದು ಇದೇ ಸುದೀಪ್.
21. ಕೆಲವು ಯುವ ಪ್ರತಿಭೆ ಗಳಿಗೆ ಪ್ರೋತ್ಸಾಹ ನೀಡಿ
ನಟರನ್ನಾಗಿಸಿರುವುದರ ಹಿಂದೆ ಸುದೀಪ್ ಅವರ ಕೈ
ಇದೆ.
22. ಎರಡು ಬಾರಿ ಸಿ ಸಿ ಎಲ್ ಗೆದ್ದು ಕೊಟ್ಟ
ಕ್ಯಾಪ್ಟನ್ ನಮ್ಮ ಸುದೀಪ್.

 1st of all it's unimaginable to imagine our industry without .A man who showed,we have even markets over state bordersA...
29/07/2015



1st of all it's unimaginable to imagine our industry without .
A man who showed,we have even markets over state borders
A man who expanded Sandalwood trade business over other states
A man who proudly represented Kannada in other states
A man who is been a helping hand for many

Thing is true that is feeling low now because of some incidents around him.

It's only now his fans support and love would bound him from quitting Industry.
So all please tweet him directly and let the trend grow even more bigger and show we his fans will never ever let him down.

Address

Bangalore

Website

Alerts

Be the first to know and let us send you an email when Wewant Kichcha Sudeep posts news and promotions. Your email address will not be used for any other purpose, and you can unsubscribe at any time.

Share