24/12/2022
ನಮ್ಮ ನಾಯಕರಾದ *ಸನ್ಮಾನ್ಯ ಶ್ರೀ ಬಂಡೆಪ್ಪ ಖಾಶೆಂಪುರ್* ರವರು, ಇಂದು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಬಳಿಕ ಕ್ಷೇತ್ರದ ಆಣದೂರುವಾಡಿ ಹತ್ತಿರದ ಭವಾನಿ ತಾಂಡದ ಮತ್ರಾಲ್ ಗಢದಲ್ಲಿ ನಡೆದ ಶ್ರೀ ಮತ್ರಾಲ್ ಭವಾನಿ ಮಾತೆಯ 44ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ನಂತರ ಬಸವಕಲ್ಯಾಣದ ಜೆಡಿಎಸ್ ಕಛೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು ಹಾಗೂ ಜನವರಿ ಮೊದಲ ವಾರ ನಡೆಯಲಿರುವ ಪಂಚರತ್ನ ರಥಯಾತ್ರೆ ಕಾರ್ಯಕ್ರಮದ ಸಿದ್ದತೆ ವಿಷಯವಾಗಿ ಪೂರ್ವಭಾವಿ ಸಭೆ ನಡೆಸಿದರು. ತದನಂತರ ಬೀದರ್ ನಗರದಲ್ಲಿ ನೂತನವಾಗಿ ಆರಂಭವಾದ ಇಸಿಲಿ ಟೆಕ್ ಆಫೀಸ್ ಉದ್ಘಾಟಿಸಿದರು.
ಬಳಿಕ ಹುಮನಾಬಾದ್ ನಲ್ಲಿರುವ ಜೆಡಿಎಸ್ ಅಭ್ಯರ್ಥಿ ಶ್ರೀ ಸಿ.ಎಮ್ ಫೈಯಾಜ್ ನಿವಾಸದ ಆವರಣದಲ್ಲಿ ಸಭೆ ನಡೆಸಿ, ಪಕ್ಷ ಸಂಘಟನೆ, ಬಲವರ್ಧನೆಯ ಬಗ್ಗೆ ಮತ್ತು ಜನವರಿ ಮೊದಲ ವಾರ ನಡೆಯಲಿರುವ ಪಂಚರತ್ನ ರಥಯಾತ್ರೆ ಯಶಸ್ವಿಯ ಬಗ್ಗೆ ಚರ್ಚಿಸಿದರು. ಜೆಡಿಎಸ್ ಜಿಲ್ಲಾಧ್ಯಕ್ಷರು, ಪಕ್ಷದ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಸೇರಿದಂತೆ ಅನೇಕರಿದ್ದರು.
====================
ಇಂದ:-
*ಅಯ್ಯಣ್ಣ (Ayyanna)*
*ಮಾಧ್ಯಮ ಸಂಯೋಜಕ / ಮಾಧ್ಯಮ ಸಹಾಯಕ*
Media Coordinator / Media Assistant
E-Mail:- [email protected]
Mobile / WhatsApp Number: 8431233830
====================
https://m.facebook.com/story.php?story_fbid=558310776309632&id=100063921421155&sfnsn=wiwspmo&mibextid=RUbZ1f
https://www.instagram.com/p/Cmjt9dovxIf/?igshid=OGQ2MjdiOTE=
https://twitter.com/Bandeppakoffice/status/1606699140062535680?t=pAZhSNC2ywku6QgQEkjt1Q&s=19